📢 ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರ ಅಳಲು – ಗೈನಕಾಲಜಿಸ್ಟ್ ನೇಮಕ ತುರ್ತು ಅಗತ್ಯ ಬೀದರ್ : ಭಾಲ್ಕಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿನಿಂದ ಸ್ತ್ರೀರೋಗ ತಜ್ಞರು (Gynecologist) ಹಾಗೂ ಪ್ರಸೂತಿ ತಜ್ಞರು (Obstetrician) ಲಭ್ಯವಿಲ್ಲದಿರುವುದರಿಂದ ಗರ್ಭಿಣಿಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಬೀದರ್ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷ ಸಂತೋಷ್ ಸೇರಿಕಾರ್ ಅವರು ಇಂದು ಭಾಲ್ಕಿ ಸರ್ಕಾರಿ ಆಸ್ಪತ್ರೆ ಎದುರು ಮಾಧ್ಯಮದ ಮುಖಾಂತರ ಆಕ್ರೋಶ ವ್ಯಕ್ತಪಡಿಸಿ, “ತಕ್ಷಣವೇ ವೈದ್ಯರನ್ನು ನೇಮಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಜಿಲ್ಲಾ