ಹುಣಸೆಕಟ್ಟೆ ಗ್ರಾಮದಲ್ಲಿ ಚಿರತೆ ದಾಳಿಗೆ ಕೋಣ ಮೃತಪಟ್ಟ ಘಟನೆ ನಡೆದಿದೆ. ರಂಗೇಗೌಡ ಅವರು ಗ್ರಾಮದ ತಮ್ಮ ಜಮೀನಿನಲ್ಲೆ ಮನೆ ಮಾಡಿಕೊಂಡು ಇದ್ದು ರಾತ್ರಿ ಸಮಯದಲ್ಲಿ ಚಿರತೆ ದಾಳಿ ಮಾಡಿದ್ದು ಕೋಣ ಮೃತಪಟ್ಟಿದೆ. ಇನ್ನೂ ರಂಗೇಗೌಡ ಅವರು ಎಂದಿನಂತೆ ಬೆಳಗ್ಗೆ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು ಚಿರತೆ ದಾಳಿಯಿಂದಾಗಿ ರಂಗೇಗೌಡ ಅವರು ಆತಂಕಕ್ಕೆ ಈಡಾಗಿದ್ದಾರೆ.