ಕಲಬುರಗಿ : ಗ್ರಾಮೀಣ ಭಾಗದಲ್ಲಿ ಸಮರ್ಪಕ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಆರೋಗ್ಯ ಸೌಲಭ್ಯಗಳು ಹಾಗೂ ಮದ್ಯವ್ಯಸನ ಮುಕ್ತವಾಗಲು ಕ್ರಮಗಳನ್ನ ಕೈಗೊಳ್ಳಬೇಕೆಂದು ಆಗ್ರಹಿಸಿ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾಗೂರ್ ಗ್ರಾಮದ ಅಜ್ಜರೊಬ್ಬರು ಪ್ರಧಾನಿ ಮೋದಿ ಭೇಟಿಗಾಗಿ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದಾರೆ.. ಸೆ9 ರಂದು ಮಧ್ಯಾನ 2 ಗಂಟೆಗೆ ನಾಗೂರ್ ಗ್ರಾಮದ ನಿವೃತ್ತ ಪೋಸ್ಟ್‌ಮ್ಯಾನ್ ಗುರುಸಿದ್ದಪ್ಪಾ ಡಬ್ಬರಾಬಾದಿ ಎಂಬುವರು ಪ್ರಧಾನಿ ಮೋದಿ ಭೇಟಿಗಾಗಿ ಪಾದಯಾತ್ರೆ ಆರಂಭಿಸಿದ್ದಾರೆ.. ಮೋದಿ ಭೇಟಿ ವೇಳೆ ಗ್ರಾಮೀಣ ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತರಲು ಗುರುಸಿದ್ದಪ್ಪ ನಿರ್ಧರಿಸಿದ್ದಾರೆ.