ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತನಾಡಿದ ಮಾಜಿ ಸಚಿವ ಸಿ ಟಿ ರವಿ ಅವರು, 21 ತಲೆಮಾರುಗಳಿಂದ ಧರ್ಮಸ್ಥಳ ವನ್ನ ಆರ್ಥಿಕವಾಗಿ ಮುನ್ನಡೆಸುತ್ತಿರುವ ಕುಟುಂಬದ ಮೇಲೆ ಕಳಂಕ ಬಂದಿದೆ. ಅದನ್ನ ಕೇಳಬಾರದಾ? ದೂರುದಾರನ ಪೂರ್ವಾಪರ ಪರಿಶೀಲನೆ ಮಾಡದೆ ತನಿಖೆಗೆ ನೀಡಿದ್ದೇಕೆ ? ಸುಳ್ಳುಸುದ್ದಿ ಹಬ್ಬುವಾಗ ಸರ್ಕಾರ ಯಾಕೆ ಅದನ್ನ ತಡೆಯಲಿಲ್ಲ? ರಮ್ಯಾ ವಿಚಾರದಲ್ಲಿ ತೆಗೆದುಕೊಂಡ ಕ್ರಮ ಧರ್ಮಾಧಿಕಾರಿಗಳ ಅಪಪ್ರಚಾರವನ್ನ ಯೂಟ್ಯೂಬ್ ನವರು ಮಾಡಿದಾಗ ಯಾಕೆ ಆಗಲಿಲ್ಲ? ಕಾಂಗ್ರೆಸ್ ಸಂಸತ್ ಸದಸ್ಯ ಇದನ್ನ ದೆಹಲಿಯ ಅವರ ಮನೆಯಲ್ಲಿ ಕುಳಿತು ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ.