ಬನ್ನಂಜೆಯ ತಾಲೂಕು ಆಪಿಸ್ ರಸ್ತೆಯಲ್ಲಿ ರಾತ್ರಿ ಹೊತ್ತು ಮಾನಸಿಕ ಅಸ್ವಸ್ಥ ಯುವತಿಯೊಬ್ಬಳು ತನ್ನ ಮಗು ಕಳೆದು ಹೋಗಿದೆ ಎಂದು ಹುಡುಕುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.ಯುವತಿ ಮೂಲತಃ ಬೆಳಗಾವಿಯವಳಾಗುದ್ದು ಮಂಜುಳ (27 ವರ್ಷ) ಎಂಬ ಮಾಹಿತಿ ನೀಡಿದ್ದಾಳೆ. ಯುವತಿ ನೀಡಿದ ದೂರವಾಣಿ ಸಂಖ್ಯೆಯ ಮೂಲಕ ಅವಳ ಪತಿಯ ಮನೆಯವರನ್ನು ಸಂಪರ್ಕಿಸಿದಾಗ ಅವರು ಸರಿಯಾದ ಸ್ಪಂದನೆ ನೀಡಲಿಲ್ಲ . ಯುವತಿ ಮಾನಸಿಕ ಅಸ್ವಸ್ಥತೆಯಾಗಿ ತನ್ನ ಮಗು ಕಳೆದು ಹೊಗಿದೆ ಎಂದು ಕೂಗುತ್ತ ದುಃಖಿಸುತ್ತಿದ್ದಳು.