ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಬಿಡು ಕೊಟ್ಟಿದ್ದ ಮಳೆ ಇಂದು ಮತ್ತೆ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆ ಕಾಲ ಸುರಿದಿದ್ದು ಮಲೆನಾಡಿಗರ ಜನ ಜೀವನವನ್ನು ಅರ್ಥವ್ಯಸ್ತಗೊಳಿಸಿತು. ದಿಡೀರ್ ಮಳೆ ಆರಂಭವಾಗಿದ್ದರಿಂದ ಸಾರ್ವಜನಿಕರು ಪರದಾಟ ಪಡುವಂತಾಗಿತ್ತು.