ಸೋಮವಾರ ರಾತ್ರಿ 12 ಗಂಟೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟ ಹಬ್ಬದ ಹಿನ್ನೆಲೆಯಲ್ಲಿ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಅಭಿಮಾನಿಗಳು ಕಿಚ್ಚನ ಬರ್ತ್ ಡೇ ಸೆಲೆಬ್ರೇಷನ್ ಮಾಡಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಸುದೀಪ್ ಹುಟ್ಟು ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕಿಚ್ಚ ಸುದೀಪ್ ಅವರ ಬೃಹತ್ ಗಾತ್ರದ ಪ್ಲೇಕ್ಸ್ ಗಳನ್ನ ಕಟ್ಟಿ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ರಾತ್ರಿ 12 ಗಂಟೆಗೆ ಕೇಕ್ ಕಟ್ ಮಾಡಿ ಕಿಚ್ಚನ ಹುಟ್ಟು ಹಬ್ಬ ಆಚರಿಸಿದರು. ಇದೇ ವೇಳೆ ಅಭಿಮಾನಿಗಳು ಸುದೀಪ್ ಪರ ಜೈಕಾರ ಕೂಗಿ ಹುಟ್ಟು ಹಬ್ಬಕ್ಕೆ ವಿಷ್ ಮಾಡಿದರು. ನಟ ಸುದೀಪ್ ಬಾವುಟ ಹಿಡಿದು ಬೈಕ್ ಗಳಲ್ಲಿ ರೌಂಡ್ಸ್ ಹಾಕಿದ ಕೇಕೆ ಶಿಳ್ಳೆ ಹಾಕಿ ಸಂಭ್ರಮಿಸಿದರು.