ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶ್ರೀ ಶಿವಯೋಗ ಮಂದಿರ ಸಂಸ್ಥಾಪಕ ಸಮಾಜಯೋಗಿ ಕಾರಣಿಕ ಯುಗಪುರುಷ ಪೂಜ್ಯಶ್ರೀ ಲಿಂ. ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158 ನೇ ಜಯಂತಿ ಮಹೋತ್ಸವ ಸಮಾರಂಭದ ಅಂಗವಾಗಿ ಪರಮಪೂಜ್ಯ ಸ್ವಾಮಿಗಳಿಂದ ಸದ್ಭಾವನಾ ಪಾದಯಾತ್ರೆ ಗಂಗಾವತಿ ನಗರದಲ್ಲಿ ಪ್ರತಿದಿನ ಬೆಳಗ್ಗೆ 5-30 ರಿಂದ 7-00 ರವರೆಗೆ ಗಂಗಾವತಿ ನಗರದ ವಾರ್ಡ್‌ಗಳಲ್ಲಿ ಮತ್ತು 8:30 ರಿಂದ 12:30 ಗಂಗಾವತಿ ಗ್ರಾಮೀಣ ಭಾಗದಲ್ಲಿ. ಸಂಜೆ 6-00 ರಿಂದ 8-30 ರವರೆಗೆ ಶ್ರೀ ಗುರು ಕುಮಾರೇಶ್ವರ ಶಿವಯೋಗಿಯವರ ಪ್ರವಚನ ನಡೆಯಲಿದೆ ಎಂದು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.