ಜಾತಿ ಜನಗಣತಿ ಸಮೀಕ್ಷೆ ವೇಳೆ ಪ್ರತಿಯೊಬ್ಬರೂ ಕಡ್ಡಾಯವಾಗಿ ವೀರಶೈವ ಲಿಂಗಾಯತ ಎಂದೇ ಬರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬಾಬುರಾವ ಪೋಚಂಪಳ್ಳಿ ಮನವಿ ಮಾಡಿದರು. ನಗರದಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಮಹಾಸಭಾ ಪ್ರಕಟಿಸಿದ ಕರಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗುರುಲಿಂಗಭಾವಿಪ್ರಮುಖರಾದ ವಿಶ್ವನಾಥ ಮರೂರ್, ಮಲ್ಲಿಕಾರ್ಜುನ, ಭದ್ರೇಶ ಮತ್ತಿತರರು ಹಾಜರಿದ್ದರು.