ಹಿಂದೂ ಮಹಾ ಗಣಪನಿಗೆ ಸಿಂದೂರ ಮಂಟಪ ಸಿದ್ದಪಡಿಸಿದ್ದಾಗಿ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀ ತಿಳಿಸಿದ್ದಾರೆ. ಚಿತ್ರದುರ್ಗ ಹಿಂದೂ ಮಹಾ ಗಣಪತಿ ಪ್ರತಿಷ್ಠಾನ ಸಮಿತಿ ವತಿಯಿಂದ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ವೇಳೆ ಶ್ರೀಗಳು ಮಾತನಾಡಿದ್ದು ವಿಶ್ವ ಹಿಂದೂ ಪರಿಷದ್ ನ ವತಿಯಿಂದ ಗಣಪತಿ ಮಹೋತ್ಸವ ಹಮ್ಮಿಕೊಂಡಿದ್ದು ನಾಳೆ ಬೆಳಗ್ಗೆ 10 ಗಂಟೆಗೆ ಗಣೇಶ ಪ್ರತಿಷ್ಟಾಪನೆ ಹಮ್ಮಿಕೊಂಡಿದ್ದು ವಿಶೇಷವಾಗಿ ಗಣೇಶನ 31 ನೇ ಅವತಾರದಂತೆ ಸಂದರ್ಭದಲ್ಲಿ ವೇದಿಕೆ ಹಿಂಭಾಗದಲ್ಲಿ ಸಿಂದೂರ ವೇದಿಕೆಯನ್ನ ಸಿದ್ದಪಡಿಸಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ