ಗಣಪತಿ ಪ್ರತಿಷ್ಟಾಪನೆ ಮಾಡಲು ತಾಲೂಕು ಕಚೇರಿಗಳಲ್ಲಿನ ಏಕಗವಾಕ್ಷಿ ಕೇಂದ್ರಗಳಲ್ಲಿ ಜನಜಾತ್ರೆ ಸೇರಿದ್ದು ಮಂಗಳವಾರ ಕಂಡುಬಂದಿತು. ಚಾಮರಾಜನಗರ, ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಸಂಜೆಯಾದರೂ ಅನುಮತಿಗಾಗಿ ಸಾರ್ವಜನಿಕರು ದೌಡಾಯಿಸಿ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಚಾಮರಾಜನಗರ ಜಿಲ್ಲಾದ್ಯಂತ 800 ಕ್ಕೂ ಅಧಿಕ ಕಡೆ ಗಣಪತಿ ಪ್ರತಿಷ್ಟಾಪನೆ ಮಾಡುವ ನಿರೀಕ್ಷೆ ಇದ್ದು ಗಣಪತಿ ಮಂಡಲಿಗಳು, ಯುವಕ ಮಿತ್ರರು ಸೇರಿ ಹಲವು ಸಂಸ್ಥೆಗಳು ಅನುಮತಿಗೆ ಅರ್ಜಿ ಸಲ್ಲಿಸುತ್ತಿದ್ದರು. ಪ್ರತಿಷ್ಟಾಪನೆಗೆ ಸ್ಥಳೀಯ ಆಡಳಿತ, ಅಗ್ನಿಶಾಮಕ, ಕೆ.ಇ.ಬಿ, ಪೊಲೀಸ್ ಇಲಾಖೆಗಳ ಅನುಮತಿ ಕಡ್ಡಾಯ ಹಿನ್ನೆಲೆ ಎಲ್ಲಾ ದಾಖಲಾತಿ ಪರಿಶೀಲನೆ ನಡೆಸಿ ಅಧಿಕಾರಿಗಳು ಅನುಮತಿ ಕೊಡುತ್ತಿದ್ದರು.