ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರವರ ಆಯ್ಕೆ ಸ್ವಾಗತಾರ್ಹ ಸರ್ಕಾರ ಯಾವುದೇ ಕಾರಣಕ್ಕೂ ಈ ನಿರ್ಧಾರ ದಿಂದ ಹಿಂದೆ ಸರಿಯಬಾರದು ಎಂದು ಸಾಗರದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ರವರು ಬಾನು ಮುಸ್ತಾಕ್ ರವರ ಪರ ಮಾತನಾಡಿದರು.ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ವಿರೋಧ ಪಕ್ಷಗಳು ಇರುವುದೇ ವಿರೋಧ ಮಾಡಕ್ಕೆ ಅವರು ಎಲ್ಲವನ್ನು ವಿರೋಧ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ.ಸರ್ಕಾರದ ಮೇಲೆ ಯಾವ ರೀತಿ ಒತ್ತಡ ತರುತ್ತಿದ್ದಾರೆ ಅಂದರೆ ದಸರಾ ವಿಚಾರ ಇಟ್ಟುಕೊಂಡು ಒಂದು ಕೋಮಿಗೆ ಅವಹೇಳನ ಮಾಡುವುದು ಮಾಡುತ್ತಿದ್ದಾರೆ. ಸರ್ಕಾರದ ನಿರ್ಧಾರ ಸ್ವಾಗತಾರ್ಹ ಸರ್ಕಾರ ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಹೇಳಿದರು