ಮದ್ದೂರು ತಾಲ್ಲೂಕು ಭಾರತೀನಗರದ ಭಾರತೀಕಾಲೇಜಿನಲ್ಲಿ ಭಾರತೀ ವಿದ್ಯಾಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ.ಎಂ.ಎಸ್.ಮಹದೇವಸ್ವಾಮಿ ವಹಿಸಿ ಮಾತನಾಡಿ, ಸಂಘದ ಅಭಿವೃದ್ದಿಗಾಗಿ ಸಾಲ ಪಡೆದಂತಹ ಎಲ್ಲಾ ಸದಸ್ಯರು ಸಕಾಲಕ್ಕೆ ಹಣವನ್ನು ಮರುಪಾತಿಸಬೇಕೆಂದು ಮನವಿ ಮಾಡಿದರು. ಈ ಸಂಘ 35 ವರ್ಷ ಯಶಸ್ವಿಯಾಗಿ ಪೂರೈಸಿದೆ. ಯಾವುದೇ ತೊಡಕಿಲ್ಲದೆ ನಡೆಯುತ್ತಿರುವುದು ಸದಸ್ಯರ ಸಹಕಾರದಿಂದ. 2024-25 ನೇ ಸಾಲಿನಲ್ಲಿ 3,22,310 ರೂ ನಿವ್ವಳ ಲಾಭಗಳಿಸಿದೆ. ಸಂಘದಿಂದ ಷೇರುದಾರರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಾ ಬಂದಿದ್ದೇವೆ ಎಂದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ದೊಡ್ಡಯ್ಯ ಅವರು ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಷೇರುದಾರರು ಸಂಘದ