ಈಹಿಂದೆ ತಹಶೀಲ್ದಾರ್ ಆಗಿದ್ದ ದಯಾನಂದ್ ಅವರು ಪರಿಸರ ಪ್ರಜ್ಞೆಯಿಂದ ಬೆಳೆಸಿದ್ದ ಗಿಡಮರಗಳನ್ನು ಸ್ಥಳೀಯ ಶಾಸಕರು ಹಾಗು ಈಗಿನ ತಹಶೀಲ್ದಾರ್ ಅವರು ಸೇರಿಕೊಂಡು ರಜಾ ದಿನವಾಗಿರುವ ಭಾನುವಾರ ನೆಲಸಮ,ಮಾಡಿರುವವರವಿರುದ್ದಕ್ರಮಕೈಗೊಳ್ಳಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತಮ ಪರಿಸರವನ್ನು ಬೆಳೆಸಬೇಕೆಂದು ಪರಿಸರವಾದಿ ಪದೇ ಪದೆ ಹೇಳುತ್ತಿದ್ದರೆ, ಪಟ್ಟಣದ ಹೃದಯಾ ಭಾಗದಲ್ಲಿರುವ ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ಅವರು ಗಿಡಮರಗಳನ್ನು ತೆರವುಗೊಳಿಸಿದ್ದಾರೆ.ಅರಣ್ಯ ಇಲಾಖೆಯವರು ಯಾವುದೇ ಅನುಮತಿ ನೀಡದಿದ್ದರೂ ಹಾಗೂ ಜಿಲ್ಲಾ ಧಿಕಾರಿಗಳು ಗಿಡಮರಗಳನ್ನು ತೆಗೆಯಬಾ ರದೆಂದು ಹೇಳಿದ್ದರೂ ಆದೇಶಕ್ಕೆ ಬೆಲೆಯಿಲ್ಲವಾ ಎಂದ್ರು