ಶಾಲಾ ವಾಹನವೊಂದು ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮಸವಾರನ ತಲೆಗೆ ಗಂಭೀರವಾದ ಗಾಯಗಳಾದ ಘಟನೆ ಚಾಮರಾಜನಗರ ತಾಲೂಕಿನ ಬಡಗಲಪುರ ಸಮೀಪ ಸೋಮವಾರ ನಡೆದಿದೆ. ತಮಿಳುನಾಡು ಮೂಲದ ಷರೀಫ್ ಎಂಬ ಬೈಕ್ ಸವಾರ ಗಾಯಗೊಂಡವರು. ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೆ ಅಪಾಯ ಸಂಭವಿಸಿಲ್ಲ. ಬಸ್ ಚಾಲಕನ ಅಜಾಗೂರಕತೆಯೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರ ಆರೋಪಿಸಿದ್ದು ಅವಘಡ ಆಗುತ್ತಿದ್ದಂತೆ ಶಾಲಾ ವಾಹನ ಚಾಲಕ ಪರಾರಿಯಾಗಿದ್ದಾನೆ.