ಪಾಂಡವಪುರ : ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ (ಎಆರ್) ಎಚ್ ಆರ್ ನಾಗಭೂಷಣ್ ರವರ ವಿರುದ್ಧ ಪಾಂಡುಪುರ ಉಪ ವಿಭಾಗದ ಸಹಕಾರ ಸಂಘದ ಕಚೇರಿ ಎದುರು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ನೆರೆದ ಹಲವು ಸಹಕಾರ ಸಂಘಗಳ ನಿರ್ದೇಶಕರು ಪ್ರತಿಭಟನೆ ನಡೆಸಿದರು. ಸೋಮವಾರ ಸಾಯಂಕಾಲ 4 ಗಂಟೆ ಸಮಯದಲ್ಲಿ ಕಚೇರಿ ಮುಂದೆ ನೆರೆದ ಪ್ರತಿಭಟನಾ ಕಾರರು ಎಚ್ ಆರ್ ನಾಗಭೂಷಣ್ ವಿರುದ್ಧ ಘೋಷಣೆ ಕೂಗಿದರಲ್ಲದೆ ಸ್ಥಳದಲ್ಲೇ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ ಕಳೆದ ಐದು ವರ್ಷಗಳಿಂದ ಹೊಸ ಹೊಳಲು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿದ್ದ ಎಚ್ ಎಮ್ ಕೃಷ್ಣ ಅವರನ್ನು ಜಾತಿ ಆಧಾರದ ಮೇಲೆ ವಜಾಗೊಳಿಸಿ ರುವ ನಾಗಭೂಷಣ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.