ತುಮಕೂರಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಗೆ ಸರ್ಕಾರ 2 ಎಕರೆ ಭೂಮಿ ಮಂಜೂರು ಮಾಡಿರುವ ವಿಚಾರದ ಬಗ್ಗೆ ಆಕ್ಷೇಪ ವಿದ್ದರೆ ಬಿಜೆಪಿ ನಾಯಕರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ ಅದನ್ನ ಬಿಟ್ಟು ಬೀದಿಗಿಳಿದು ಹೋರಾಟ ಮಾಡುವುದು ಸಂತೆಯಲ್ಲಿ ನ್ಯಾಯ ಕೇಳಿದಂತಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ವ್ಯಂಗ್ಯವಾಡಿದರು.ಅವರು ತುಮಕೂರು ನಗರದ ರಿಂಗ್ ರಸ್ತೆಯಲ್ಲಿರುವ ತಾತ್ಕಾಲಿಕ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಧ್ಯಾಹ್ನ 12.10 ರ ಸಮಯದಲ್ಲಿ ಮಾತನಾಡಿದರು.ಈ ವಿಚಾರವಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಬಿಜೆಪಿ ನಾಯಕರು ಏಕೆ ತೊದರೆಕೊಡಬೇಕು, ನಿಮಗೆ ನ್ಯಾಯ ಬೇಕಾದರೆ ಬಜಾರ್ ಗೆ ಬರಬೇಡಿ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳಿದರು.