ಸೊರಬ ತಾಲೂಕಿನ ಕರಣ್ ಎಂಬ ಗಂಡ ಮತ್ತು ಗಂಡನ ಕುಟುಂಬದವರಿಂದ ವರದಕ್ಷಿಣೆ ಕಿರುಕುಳ,ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆ ಹಿಸುಕಿ ಕೊಲ್ಲುವಯತ್ನಿಸಿದ್ದಾರೆ ಎಂದು ಪತ್ನಿ ಭಾವನ.ವಿ ಆರೋಪಿಸಿದ್ದಾರೆ ಸಾಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ಮದುವೆಯಾಗಿ ಕೇವಲ 1-2 ತಿಂಗಳು ಮಾತ್ರ ಚೆನ್ನಾಗಿ ನೋಡಿಕೊಂಡರು ತದನಂತರ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದಾರೆ ಕಾಲಿನಿಂದ ಒದೆಯುವುದು.ಕೈಯಿಂದ ಗುದ್ದುವುದು.ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸುವ ಮೂಲಕ ನಿನ್ನ ಕುಟುಂಬದವರ ಹತ್ತಿರ ವಿಷಯ ತಿಳಿಸಿದರೆ ಅಪಘಾತ ಮಾಡಿಕೊಳ್ಳುತ್ತೇನೆ ಎಂದು ನನ್ನ ಪತಿ ಕರಣ್ ಬೆದರಿಕೆ ಹಾಕುತ್ತಿದ್ದಾರೆ ಎಂದು ಭಾವನ ಅಳಲನ್ನು ತೋಡಿಕೊಂಡಿದ್ದಾರೆ.ಸೊರಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ ಎಂದರು