ತುಮಕೂರಲ್ಲಿ ಮಾಜಿ ಕಾರ್ಪೋರೇಟರ್ ವಿರುದ್ಧ ಯುವತಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.ಈ ಸಂಬಂಧ ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ದಂಪತಿ ಇಂದ್ರಕುಮಾರ್-ನಳಿನಾ ಇಂದ್ರಕುಮಾರ್ ಹಾಗೂ ಪುತ್ರ ಯಶಸ್ವಿ ವಿರುದ್ಧ FIR ಸಹ ದಾಖಲಾಗಿದೆ.ಸಂಸತ್ರ ಯುವತಿಗೆ ಪ್ರೀತಿಯ ಹೆಸರೇಳಿ, ಮಾಜಿ ಕಾರ್ಪೊರೇಟರ್ ದಂಪತಿ ಪುತ್ರ ಯಶಸ್ವಿ ಮದುವೆಯಾಗಿದ್ದನು. ಬಳಿಕ ಕಿರುಕುಳ ನೀಡಿ ಸಂತ್ರಸ್ತೆಯನ್ನು ಹೊರಹಾಕಿದ್ದು, ಇನ್ನೊಬ್ಬ ಯುವತಿಯನ್ನು ಮದುವೆಯಾಗಲು ಹೊಂಚು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.ಇದಲ್ಲದೆ ಮದುವೆ ಸಂದರ್ಭದಲ್ಲಿ ಯುವತಿಗೆ ಆಕೆಯ ಕುಟುಂಬ ಸದಸ್ಯರು ನೀಡಿದ್ದ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ.