ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಆಗಷ್ಟ್ 27 ರಂದು ಮಾಂಸಮಾರಾಟ ಬಂದ್ ಮಾಡಲಾಗಿದೆ. ಶ್ರೀ ಗಣೇಶ ಚತುರ್ಥಿ ಅಂಗವಾಗಿ ಅಗಷ್ಟ್ 27 ರಂದು ಜಾನುವಾರುಗಳ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮಾಂಸ ಮಾರಾಟ ಮಾಡುವದಾಗಲಿ ಹಾಗೂ ಜಾನುವಾರುಗಳನ್ನು ವಧೆ ಮಾಡದಿರಲು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂಥವರ ಲೈಸನ್ಸನ್ನು ರದ್ದು ಮಾಡಲಾಗುವುದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.