ಕೇಸರಿ ಟವೆಲ್ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾರ್ಮಿಕನ ಮೇಲೆ ಹಲ್ಲೆಗೈದಿದ್ದ ಮೂವರು ಆರೋಪಿಗಳನ್ನ ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಬ್ರೇಜ್, ಇಮ್ರಾನ್ ಖಾನ್ ಹಾಗೂ ಅಜೀಜ್ ಖಾನ್ ಬಂಧಿತ ಆರೋಪಿಗಳು.ಆಗಸ್ಟ್ 24ರಂದು ಕಲಾಸಿಪಾಳ್ಯದ ಎ.ವಿ.ರಸ್ತೆಯ ರಾಯಲ್ ಟ್ರಾವೆಲ್ಸ್ ಕಂಪನಿಯ ಕಾರ್ಮಿಕ ಸ್ಲಿಂದರ್ ಕುಮಾರ್, ಹಾಗೂ ಲೋಡಿಂಗ್ & ಅನ್‌ಲೋಡಿಂಗ್ ಇನ್‌ಚಾರ್ಜ್ ಹರಿಕೃಷ್ಣ ಎಂಬುವವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಪ್ರಕರಣದ ಕುರಿತು ಆಗಸ್ಟ್ 26ರಂದು ಬೆಳಿಗ್ಗೆ 11:30ಕ್ಕೆ ಮಾಹಿತಿ ನೀಡಿದ ಪೊಲೀಸರು, ತಡರಾತ್ರಿ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದರು.