ಕಾಂಗ್ರೆಸ್ ಸರ್ಕಾರ ಮುಸ್ಲಿಂರ ಓಲೈಕೆಯಲ್ಲಿ ತೊಡಗಿದೆ. ಸಿದ್ದರಾಮಯ್ಯನವರು ಮುಸ್ಲಿಮರ ಪರವಾಗಿದ್ದಾರೆ.ಇದನ್ನು ಹಿಂದೂ ಸಮಾಜ ಸಹಿಸುವುದಿಲ್ಲ.ರಕ್ಷಣಾ ಮತ್ತು ಗೃಹ ಸಚಿವರ ಬಗ್ಗೆ ನಾನು ಹೇಳಲ್ಲ.ಯಾಕೆ ಅಷ್ಟೊಂದು ಹೆದರಿಕೊಂಡು ಸಾಯ್ತಾ ಇದಿರಾ ಗೃಹ ಸಚಿವರೇ ಎಂದು ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭದ್ರಾವತಿ ಶಾಸಕ ಸಂಗಮೇಶ್ ಮುಸ್ಲಿಂ ಕುಟುಂಬದಲ್ಲಿ ಹುಟ್ಟಬೇಕಿತ್ತು ಎನ್ನುತ್ತಿದ್ದಾರೆ ನಿಮಗೆ ಮುಂದಿನ ಜನ್ಮ ಎಂಬುದೇ ಇರುವುದಿಲ್ಲ ಮುಸ್ಲಿಮರ ಕುಟುಂಬದಲ್ಲಿ ಹುಟ್ಟಲು ಯಾಕೆ ಬಯಸುತ್ತಿರಾ? ಎಂದು ಶಾಸಕ ಚನ್ನಬಸಪ್ಪ ಪ್ರಶ್ನಿಸಿದ್ದಾರೆ.