ಅತಿಥಿ ಉಪನ್ಯಾಸಕರಿಲ್ಲದೇ ಪದವಿ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಶೈಕ್ಷಣಿಕ ಗೊಂದಲ ಪರಿಹರಿಸಲು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ಇಂದು ನಡೆಯಿತು. ಸೆಪ್ಟೆಂಬರ್ 04 ರಂದು ಮಧ್ಯಾಹ್ನ 2-00 ಗಂಟೆಗೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಾಗಿರುವ ಗೊಂದಲವನ್ನು ಖಂಡಿಸಿ ಕೊಪ್ಪಳ ನಗರದ ಅಶೋಕ ವೃತ್ತದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾ ಕಾರ್ಯಕರ್ತರಾದ ಪ್ರದೀಪ್, ಶರಣಪ್ಪ, ಅಪ್ಪಾಜಿ, ತಿರುಪತಿ, ವಿದ್ಯಾರ್ಥಿಗಳಾದ ರುಕ್ಸನಾ ಬೇಗಂ, ಸಾವಿತ್ರಿ,ತುಳಸಿ,ಆಕಾಶ್, ಹುಲಿಗಮ್ಮ,ಲಕ್ಷ್ಮಿ,ನೇತ್ರಾ, ದರ್ಶನ್, ಮಲ್ಲಪ್ಪ, ಸಂತೋಷ್ ಸೇರಿದಂತೆ ವಿವಿಧ ಕಾಲೇ