ಮುಂದಿನ ನಾಲ್ಕು ತಿಂಗಳ ಅವಧಿಗೆ ತಿಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುನಿಕೃಷ್ಣ ಅವಿರೋಧವಾಗಿ ಆಯ್ಕೆಯಾದರು.ಶುಕ್ರವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುನಿಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದು,ಬಿಜೆಪಿ ಮುಖಂಡ ಕೆ ವಿ ನಾಗರಾಜ್,ಗ್ರಾಪಂ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್,ಶಶಿ,ಪಂಚಾಯಿತಿ ಸದಸ್ಯರು ಹಾಗು ಮುಖಂಡರಾದ ರವೀಂದ್ರ ಸಮೇತ ಗ್ರಾಮದ ಮುಖಂಡರು ನೂತನ ಅಧ್ಯಕ್ಷರಗಿ ಶುಭಾಶಯ ಕೋರಿ ಆಡಳಿತ ಅವಧಿಯಲ್ಲಿ ತಿಪ್ಪೇನಹಳ್ಳಿ ಪಂಚಾಯಿತಿ ಅಭಿವೃದ್ಧಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.