ಜೆಸ್ಕಾಂನ ಸಿದ್ದಿ ವಿನಾಯಕ ಮಂಡಳಿ ವತಿಯಿಂದ 61ನೇ ವರ್ಷದ ಗಣೇಶ ಹಬ್ಬದ ಸಂಭ್ರಮದ ಅಂಗವಾಗಿ ಆಗಸ್ಟ್ 30,ಶನಿವಾರ ರಾತ್ರಿ 10:30ಕ್ಕೆ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಕೆಇಬಿ ನೌಕರರು ತಮ್ಮ ಕಲೆ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮೆಚ್ಚಿಸಿದರು. ಭರತನಾಟ್ಯ, ಸಂಗೀತ, ನೃತ್ಯ, ಹಾಸ್ಯ ಹಾಗೂ ನಾಟಕಗಳೊಂದಿಗೆ ವೇದಿಕೆ ಕಂಗೊಳಿಸಿತು.ವಿಶೇಷ ಆಕರ್ಷಣೆಯಾಗಿ “ಆಧುನಿಕ ರಾಮಾಯಣ” ನಾಟಕವನ್ನು ಪ್ರದರ್ಶಿಸಲಾಯಿತು. ಇಂದಿನ ಪೀಳಿಗೆಯಲ್ಲಿದ್ದರೆ ರಾಮ, ಲಕ್ಷ್ಮಣ, ಸೀತೆ, ರಾವಣ, ಹನುಮಂತರು ಹೇಗೆ ವರ್ತಿಸುತ್ತಿದ್ದರು ಎಂಬ ಕಲ್ಪನೆಯನ್ನು ಹಾಸ್ಯಮಿಶ್ರಿತ ಭಕ್ತಿ ರೂಪದಲ್ಲಿ ಮೂಡಿಸಿ ಪ್ರೇಕ್ಷಕರನ್ನು ನಕ್ಕು ನಗಿಸಿ ಸುಸ್ತು ಮಾಡಿದರು.