ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ ಪ್ರಕರಣಕ್ಕೆ ಕುರಿತಂತೆ ಐವರನ್ನ ಬಂಗಾರಪೇಟೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಗಾರಪೇಟೆ ಮೂಲದ ಐವರು ಬಂಧಿಸಲಾಗಿದ್ದು,ಖಾದರ್ ಬಡಾವಣೆಯ ನಿವಾಸಿ ಸಯ್ಯದ್ ಗೌಸ್,ಸೋನು,ಸಿ. ರಹೀಂ ಕಾಂಪೌಂಡ್ ನಿವಾಸಿ ಸುಲ್ತಾನ್,ನಾಸೀರ್,ಸೇಟ್ ಕಾಂಪೌಂಡ್ ನಿವಾಸಿ ಸಯ್ಯದ್ ಬಂಧಿತರಾಗಿದ್ದು,ಐವರನ್ನು ನ್ಯಾಯಾಂಗ ಬಂಧನಕ್ಕೆ ಬಂಗಾರಪೇಟೆ ಪೊಲೀಸರು ಒಪ್ಪಿಸಿದ್ದಾರೆ.ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ ಮಾಡಿದವರ ವಿರುದ್ಧ ಕ್ರಮಕ್ಕೆಮಾಜಿ ಸಂಸದ ಮುನಿಸ್ವಾಮಿ ಒತ್ತಾಯ ಮಾಡಿದ್ದರು.ಕ್ರಮ ಆಗದ್ದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು ಈ ಸಂಬಂಧ ಹಿಂದೂಪರ ಸಂಘಟನೆಗಳು ಸಹ ದೂರು ನೀಡಿತ್ತು.