ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಇಡಿ ಅಧಿಕಾರಿಗಳು ಮತ್ತೆ ಶಾಕ್ ಕೊಟ್ಟಿದ್ದಾರೆ. ಚಳ್ಳಕೆರೆ ನಗರದ ಹಲವು ಬ್ಯಾಂಕ್ ಗಳ ಮೇಲೆ ಇಡಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ನಗರದ ಕೊಟೇಕ್ ಮಹೇಂದ್ರ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಪೆಡರಲ್ ಬ್ಯಾಂಕ್, ಸೇರಿ ಹಲವು ಕಡೆ ಇಡಿ ದಾಳಿ ಮಾಡಿದ್ದಾರೆ. ನಾಲ್ಕು ಇನ್ನೋವಾ ಕಾರುಗಳಲ್ಲಿ ಆಗಮಿಸಿರುವ 10 ಕ್ಕೂ ಹೆಚ್ಚು ಮಂದಿ ಇಡಿ ಅಧಿಕಾರಿಗಳಿಂದ ದಾಳಿ ಮಾಡಿದ್ದಾರೆ. ಬ್ಯಾಂಕ್ ಗಳು ಓಪನ್ ಆಗುತ್ತಿದ್ದಂತೆ ಎಂಟ್ರಿ ಕೊಟ್ಟಿರುವ ಇಡಿ ಅಧಿಕಾರಿಗಳು, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಸೇರಿದ 17 ಬ್ಯಾಂಕ್ ಖಾತೆ, ಬ್ಯಾಂಕ್ ಲಾಕರ್ ಗಳನ್ನ ಇಂದು ಓಪನ್ ಮಾಡುವ ಸಾಧ್ಯತೆ ಇದೆ.