ಇಂದು ಗುರುವಾರ ವಿಶ್ವದಾದ್ಯಂತ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಕೊಪ್ಪಳದ ಕರಾವಳಿಗರು ನಗರದ ಲಕ್ಷ್ಮಿ ಚಿತ್ರಮಂದಿರಕ್ಕೆ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಕುಟುಂಭ ಸಮೇತರಾಗಿ ಆಗಮಿಸಿ ಚಿತ್ರವನ್ನ ವೀಕ್ಷಣೆ ಮಾಡಿದ್ದಾರೆ. ಚಿತ್ರ ಆರಂಭವಾಗುತ್ತಿದ್ದಂತೆ ಸ್ಕ್ರೀನ್ ಗೆ ಪೂಜೆ ಸಲ್ಲಿಸಿ ಕುಂಬಳಕಾಯಿ ಹೊಡೆಯುವ ಮೂಲಕ ಕಾಂತಾರಾ ಯಶಸ್ವಿಯಾಗಿ ಪ್ರದರ್ಶನ ಗೋಳ್ಳಲ್ಲಿ ಎಂದು ಶುಭ ಹಾರೈಸಿದ್ದಾರೆ.