ಉಪ ಲೋಕಾಯುಕ್ತ ನ್ಯಾ.ಬಿ ವೀರಪ್ಪ ಅವರು ಆಗಸ್ಟ್ 28ರಂದು ಮಧ್ಯಾಹ್ನ ವೇಳೆ ರಾಯಚೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ರಿಮ್ಸ್)ಯ ಬೋಧಕ ಆಸ್ಪತ್ರೆಗೆ ಭೇಟಿ ನೀಡಿ ತಾಸಿಗು ಹೆಚ್ಚು ಸಮಯ ನಾನಾ ವಾರ್ಡಗಳಿಗೆ ತೆರಳಿ ಪರಿಶೀಲಿಸಿದರು. ರಿಮ್ಸ್ ಆಸ್ಪತ್ರೆಯಲ್ಲಿ ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿ ಅಶುಚಿತ್ವ, ಅಶಿಸ್ತು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಮೊದಲಿಗೆ ಎಂ.ಆರ್.ಐ ಸ್ಕ್ಯಾನ್ ಯಂತ್ರದ ಕೊಠಡಿ ಹಾಗೂ 600 ಎಮ್‌ಎ ಕ್ಷ-ಕಿರಣ ಯಂತ್ರ ಮತ್ತು ಐಐಟಿವಿ ಕೇಂದ್ರಕ್ಕೆ ಭೇಟಿ ನೀಡಿ ಯಂತ್ರಗಳ ವೀಕ್ಷಣೆ ನಡೆಸಿ ಯಂತ್ರಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಬಳಿಕ ಮೂರನೇ ಮಹಡಿಗೆ ತೆರಳಿ ಮಕ್ಕಳ ತೀವ್ರ ನಿಗಾ ಘಟಕ, ಡೈಯಾಲಿಸಸ್ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.