ಹಲಗೂರಿನ ಪಟ್ಟದ ರಾಣಿ ದೇವಸ್ಥಾನದಲ್ಲಿ ಮೂರನೇ ವಾರ್ಷಿಕ ಪೂಜಾ ಮಹೋತ್ಸವ. ಮಳವಳ್ಳಿ ತಾಲ್ಲೂಕಿನ ಹಲಗೂರಿನ ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದ ರಾಣೆ ಅಮ್ಮನವರ ದೇವಸ್ಥಾನದಲ್ಲಿ ಸೇವಾ ಟ್ರಸ್ಟ್ ವತಿಯಿಂದ ಮೂರನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮ, ಸುಬ್ರಮಣ್ಯ ಹೋಮ ,ಗಾಯತ್ರಿ ದೇವಿ ದುರ್ಗಾ ಹೋಮ, ಪಂಚಾಮೃತ ಅಭಿಷೇಕ ನಡೆಸಿ ಅಮ್ಮನವರಿಗೆವಿಳೇದೆಲೆಯಿಂದ ವಿಶೇಷವಾಗಿ ಅಲಂಕರಿಸಿ ಪೂಜಾ ಮಹೋತ್ಸವವನ್ನು ಭಕ್ತಿ ಭಾವಪೂರ್ವಕವಾಗಿ ಆಚರಿಸಲಾಯಿತು. ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಿಂದ ಪಟ್ಟದ ರಾಣಿ ಹಾಗೂ ಸಿದ್ದೇಶ್ವರ ಸ್ವಾಮಿ ಸತ್ತಿಗೆಗಳನ್ನು ಹೂ ಹೊಂಬಾಳೆ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ಮುಖಾಂತರ ದೇವಸ್ಥಾನ