ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಶೆಟ್ಟಿಕೊಪ್ಪ ಕಡಗಿನ ಬೈಲು ಗ್ರಾಮ ಪಂಚಾಯತಿ ಸ್ಟೇಟ್ ಹೈವೆಯಿಂದ ಅರೆಕೊಪ್ಪ ಮಾರ್ಗವಾಗಿ ಗಾಂಧಿ ಗ್ರಾಮಕ್ಕೆ ಹೋಗುವ ರಸ್ತೆಯು ಕೆಲವು ವರ್ಷಗಳಿಂದ ಟಾಂಬರ್ ಸಂಪೂರ್ಣ ಕಿತ್ತುಹೋಗಿ ರಸ್ತೆ ತುಂಬಾ ಗುಂಡಿಬಿದ್ದು ವಾಹನ ಸಂಚಾರಕ್ಕೆ ಬಹಳ ಕಷ್ಟಕರವಾಗಿತ್ತು ,ಬೈಕ್ ,ಸೈಕಲ್ ಸವಾರರು ಹಲವುಬಾರಿ ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇತ್ತೀಚೆಗೆ ಸತತವಾಗಿ 2 ತಿಂಗಳಿಂದ ಸುರಿದ ಮಳೆಯಿಂದ ಅರೆಕೊಪ್ಪದಿಂದ ಗಾಂಧಿ ಗ್ರಾಮದ ರಸ್ತೆಗಳಲ್ಲಿ ಮಿನಿಕೆರೆಗಳೇ ಆಗಿ ಹೋಗಿದೆ. ಇದರಿಂದ ಗ್ರಾಮಸ್ಥರೇ ತಮ್ಮ ಸ್ವಂತ ಹಣದಿಂದ ಗುಂಡಿ ಮುಚ್ಚಿದ್ದಾರೆ.