ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿಯನ್ನು ಸಾಗಾಟ ಮಾಡುವಾಗ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿಯಾಗಿ ಬುದುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಬೇವನೂರ ತಾಂಡಾ ಕ್ರಾಸ್ ಬಳಿ ನಡೆದಿದೆ. ಸೊಲ್ಲಾಪುರ ನಿವಾಸಿಗಳಾದ ಫಿರೋಜ್ ನೂರೆವಾಲೆ, ಸಂಜೀವಕುಮಾರ ಟೆಂಗಳೆ ಬಂಧಿತ ಆರೋಪಿಗಳು. ಇನ್ನು ಆರೋಪಿಗಳಿಂದ ಟಂಟಂ ಗೂಡ್ಸ್, ನಾಲ್ಕು ಕೆಜಿ ಸ್ಯಾಂಪಲ್ ಅಕ್ಕಿ, 880 ಕೆಜಿ ಅಕ್ಕಿ ಸೇರಿದಂತೆ 60,636 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.