ಭದ್ರಾವತಿ ಯಲ್ಲಿ ಪಾಕಿಸ್ತಾನ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಹನ್ನೆರಡು ಸೆಕೆಂಡಿನ ವೀಡಿಯೋ ಒಂದು ಹರಿದಾಡ್ತಿದೆ. ಅದರ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ಶಿವಮೊಗ್ಗ ಎಸ್ಪಿಯವರಿಗೆ ನಿನ್ನೆಯೇ ಹೇಳಿದ್ದೇನೆ. ಇಲಾಖೆಯ ಯವರು ಕಠಿಣವಾಗಿ ಏನು ಕ್ರಮ ತಗೊಳ್ತಾರೆ ಅಂತ ನೋಡಬೇಕು. ಅಕಸ್ಮಾತ್ತಾಗಿ ಹೇಳಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದೇನೆ. ಎಸ್ಪಿಯವರಿಗೆ ಸ್ವತಂತ್ರ ವಾಗಿ ಅಧಿಕಾರ ಕೊಡಲಾಗಿದೆ ಎಂದರು.