೨೦೧೧ರಲ್ಲಿ ನಕಲಿ ಪಿಯುಸಿ ಅಂಕಪಟ್ಟಿ ಲಗತ್ತಿಸಿ ಆನ್‌ಲೈನ್ ಅರ್ಜಿ ಸಲ್ಲಿಸಿ ಗ್ರಾಮಲೆಕ್ಕಿಗ ಸರಕಾರಿ ಹುದ್ದೆ ಪಡೆದಿದ್ದರು.ನವ್ಯಶ್ರೀ ದೇವದಾಜ್,ನಟರಾಜ ಮುನಿಯಪ್ಪ,ಸುಬ್ರಮಣಿ ಎನ್ ಸಿ ಈ ಮೂವರು ನಕಲಿ ಪಿಯುಸಿ ಅಂಕಪಟ್ಟಿ ಸಲ್ಲಿಸಿ ಗ್ರಾಮಲೆಕ್ಕಿಗ ಸರಕಾರ ಹುದ್ದೆ ಪಡೆದ ವಂಚಕರಾಗಿದ್ದಾರೆ.ಅಷ್ಟೇ ಅಲ್ಲದೇ ಒಂದು ವರ್ಷ ಸರಕಾರಿ ಗ್ರಾಮಲೆಕ್ಕಿಗ ಅಂತ ಕರ್ತವ್ಯ ನಿರ್ವಹಿಸಿದ್ದಾರೆ.ನವ್ಯಶ್ರೀ ಅಸಲಿ ಪಿಯುಸಿ ಅಂಕ ೪೦೮ ಇದ್ದು ೫೩೯ ಇರುವ ನಕಲಿ ಅಂಕಪಟ್ಟಿ ಸಲ್ಲಿಸಿದ್ದರು.ನಟರಾಜ ೧೯೯ ಅಂಕ ಪಡೆಯುವ ಮೂಲಕ ಪಿಯುಸಿಯಲ್ಲಿ ಫೇಲ್ ಆಗಿದ್ದರು,ಆದರೆ ೫೫೦ ನಕಲಿ ಅಂಕಪಟ್ಟಿ ಸಲ್ಲಿಸಿದ್ದ.ಸುಬ್ರಮಣಿ ೨೭೭ ಅಸಲಿ ಅಂಕ ಪಡೆದಿದ್ದು,೫೫೪ ನಕಲಿ ಅಂಕಪಟ್ಟಿ ಸಲ್ಲಿಸಿದ್ದರು.