ಮಾಜಿ ಮೇಯರ್ ವಿಜಯ ಮೋರೆ ನೇತೃತ್ವದಲ್ಲಿ ನಗರದಲ್ಲಿ ಅನಾಥ ವೃದ್ಧೆಯ ಅಂತ್ಯಕ್ರಿಯೆ. ಸರಸ್ವತಿ ಜಾಧವ ಎಂಬ ಅನಾಥ ವೃದ್ಧೆಯ ಅಂತ್ಯಕ್ರಿಯೆಯನ್ನು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸೇರಿ ನೆರವೇರಿಸುವ ಮೂಲಕ ಮಾನವೀಯತೆ ಮತ್ತು ಭಾವೈಕ್ಯತೆಯನ್ನು ಮೆರೆದಿದ್ದಾರೆ. ಆಕೆಯ ಕಡೆಯವರು ಯಾರೂ ಬಾರದೆ ಇದ್ದಾಗ ಖಾದೀರ ಮತ್ತು ಮೋರೆ ಅವರು ಈ ಕಾರ್ಯವನ್ನು ನಿರ್ವಹಿಸಿದರು. ಸದಾಶಿವ ನಗರದ ರುದ್ರಭೂಮಿಯಲ್ಲಿ ಬುಧವಾರ, ಮಾಜಿ ಮೇಯರ್ ವಿಜಯ ಮೋರೆ ನೇತೃತ್ವದಲ್ಲಿ, 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರಸ್ವತಿ ಜಾಧವ ಅಂತ್ಯಕ್ರಿಯೆ ನೆರವೇರಿಸಿದರು