ನಾಲ್ಕು ದಿನಗಳ ಹಿಂದೆ ಬನ್ನಂಜೆ ತಾಲೂಕು ಆಫೀಸ್ ರಸ್ತೆಯಲ್ಲಿ ರಾತ್ರಿ ಹೊತ್ತು ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಮನನೊಂದ ಯುವತಿಯನ್ನು ತಾಯಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ. ಯುವತಿ ಮಂಜುಳಾ (27) ಬೆಳಗಾವಿಯ ಕಿತ್ತೂರಿನ ನಿವಾಸಿಯಾಗಿದ್ದು ಕೌಟುಂಬಿಕ ಕಲಹದಿಂದ ಮನೋರೋಗಕ್ಕೆ ತುತ್ತಾಗಿ ಬೀದಿಪಾಲಾಗಿದ್ದು ತಿಳಿದು ಬಂದಿದೆ. ಮೊದಲು ಮಹಿಳೆಯ ಪತಿಯನ್ನು ಸಂಪರ್ಕಿಸಿದಾಗ ಸರಿಯಾದ ಸ್ಪಂದನೆ ಸಿಗಲಿಲ್ಲ.