ಬೆಣ್ಣೆಹಳ್ಳದ ಅಬ್ಬರಕ್ಕೆ ರೋಣ ತಾಲೂಕಿನಾಧ್ಯಂತ ಸಾವಿರಾರು ಎಕರೆ ಜಮೀನುಗಳಿಗೆ ನೀರು ನುಂಗಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಅಲ್ಲದೆ ಹೊಲಗಳಿಗೆ ಹೋಗುವ ಎಲ್ಲಾ ದಾರಿಗಳು ಕೂಡ ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ದಾರಿಗಳನ್ನು ದುರಸ್ಥಿಗೊಳಿಸಬೇಕು ಅಂತ ಯಾವಗಲ್ ಗ್ರಾಮದ ಬಳಿ ರೈತರು ಸಚಿವ ಎಚ್ ಕೆ ಪಾಟೀಲರಿಗೆ ಮನವಿ ಮಾಡಿಕೊಂಡರು.