ಆಗಸ್ಟ್ 31 ಸಂಜೆ 5:00 ಗಂಟೆ ಸುಮಾರಿಗೆ ಹಾವು ಕಚ್ಚಿ ಮಂಜು ಪ್ರಕಾಶ್ ಅನ್ನುವ ಯುವಕ ಸಾವನಪ್ಪಿದ್ದಾನೆ. ಚಪ್ಪಲಿಯೊಳಗೆ ಕೊಳಕು ಮಂಡಲ ಹಾವು ಸೇರಿಕೊಂಡಿರುತ್ತೆ . ಇದನ್ನು ಗಮನಿಸದೇ ಹಾಗೆ ಚಪ್ಪಲಿಯನ್ನ ಧರಿಸಿ ಮಂಜು ಪ್ರಕಾಶ್ ಹೊರಗಡೆ ಹೋಗಿರುತ್ತಾನೆ. ಈ ಹಿಂದೆಯೇ ಮಂಜು ಪ್ರಕಾಶ್ ಗೆ ಅಪಘಾತವಾಗಿ ಕಾಲಿನ ಬೆರಳಿನ ಸ್ಪರ್ಶ ಕಳೆದುಕೊಂಡಿರುತ್ತಾರೆ. ಹಾವು ಕಚ್ಚಿದ್ದು ಮಂಜು ಅರಿವಿಗೆ ಬಾರಲಿಲ್ಲ. ಮನೆ ಒಳಗಡೆ ಬಂದು ಮಲಗಿದ್ದ ಮಂಜು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ಪಕ್ಕದ ಮನೆಯವರು ಮಂಜುವಿನ ಚಪ್ಪಲಿ ಗಮನಿಸಿದಾಗ ಅದರಲ್ಲಿ ಹಾವು ಕೂಡ ಸತ್ತು ಬಿದ್ದಿರುವುದು ಗೊತ್ತಾಗುತ್ತೆ. ಚಪ್ಪಲಿಯಲ್ಲಿ ಹಾವು ಗಮನಿಸದೇ ಇದ್ದ ಕಾರಣ ಯುವಕ ಸಾವನಪ್ಪಿದ್ದಾನೆ ಕುಟುಂಬಸ್ಥರ ನೋವು ಹೇಳ ತೀರದು