ಕಳೆದು ಹೋಗಿದ್ದ ಮೊಬೈಲ್ ಬಳಸಿಕೊಂಡು ಅಪರಿಚಿತರು ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮನಗರದ ನಿವಾಸಿ ಅಯಾಜ್ ಖಾನ್ ರವರಿಗೆ 61,700 ವಂಚನೆಯಾಗಿದೆ. ಅಯಜ್ ಖಾನ್ ರವರು ರೈಲಿನಲ್ಲಿ ರಾಮನಗರಕ್ಕೆ ಬರುವಾಗ ಮೊಬೈಲ್ ಕಳವಾಗಿತ್ತು. ಕಳುವಾಗಿದ್ದರೂ ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಈ ಸಂಬಂಧ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲು ಮಾಡಿದ್ದಾರೆ.