ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಗಣಪತಿ ಹಬ್ಬವನ್ನು ಸಂಭ್ರಮ ಎಡಗರದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾಗರ ಟೌನ್ ಠಾಣೆಯ ಆವರಣದಲ್ಲಿ ಗಣಪತಿಯೆಂದ ಪ್ರತಿಷ್ಠಾಪಿಸಲಾಗಿತ್ತು ಅಧಿಕಾರಿಗಳು ಸಿಬ್ಬಂದಿಗಳು ರಾಜಬೀದಿ ಉತ್ಸವದ ಮೂಲಕ ಪೊಲೀಸ್ ಠಾಣೆ ಆವರಣದಲ್ಲಿ ಕೂರಿಸಲಾಗಿದ್ದ ಗಣಪತಿಯನ್ನ ವಿಸರ್ಜನೆಗೆ ಕೊಂಡ್ಯೋಯುತ್ತಿದ್ದಾರೆ. ಮೆರವಣಿಗೆಯಲ್ಲಿ ತಮಟೆ ಹಾಗೂ ಡಿಜೆ ಸದ್ದಿಗೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯದ ಒತ್ತಡ ಮರೆತು ಗಂಗಮ್ ಸ್ಟೈಲ್ ಹಾಡಿಗೆ ಕುಣಿದು ಕುಪ್ಪಳಿಸಿದರು.