ಹನೂರು: ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಗುರುಲಿಂಗಯ್ಯ ತಿಳಿಸಿದರು ಹನೂರು ಪಟ್ಟಣದ ಮಲೆಮಹೇಶ್ವರ ಕ್ರೀಡಾಂಗಣದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿ ಕ್ರೀಡಾ ಸ್ಪರ್ಧೆಗಳಲ್ಲಿ ನ್ಯಾಯಸಮ್ಮತವಾಗಿ ತೀರ್ಪು ನೀಡಬೇಕೂ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಮತ್ತು ಉತ್ತೇಜಿಸಲು ಈ ಸ್ಪರ್ಧೆಗಳು ಉತ್ತಮ ವೇದಿಕೆಯಾಗಬೇಕು, ನಿಮ್ಮ ತೀರ್ಪಿನಿಂದ ಯಾವ ಮಕ್ಕಳಿಗೂ ಕೂಡ ಅನ್ಯಾಯವಾಗಬಾರದು ಹಾಗೂ ಯಾವ ಶಿಕ್ಷಕರ ಮನಸ್ಸು ಕೂಡ ಘಾಸಿಯಾಗದ ರೀತಿಯಲ್ಲಿ ಜವಾಬ್ದಾರಿಯವಾಗಿ ಕ್ರೀಡಾಕೂಟವನ್ನು ನೆಡೆಸಿ ಎಂದು ಸೂಚಿಸಿದರು