ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳ ಜೊತೆ ಅವರು ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಯಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಶಾಂತಿಯುತವಾಗಿ ಹಿಂದೂ ಕಾರ್ಯಕರ್ತರು ಹಬ್ಬಗಳನ್ನ ಮಾಡುತ್ತಾರೆ. ಆದರೆ ರಾಜ್ಯ ಸರ್ಕಾರ ಇಂಥ ಹಬ್ಬಗಳಿಗೆ ನಿಯಂತ್ರಣ ಮಾಡುತ್ತಿದೆ. ಡಿಜೆಗಳಿಗೆ ಅನುಮತಿ ನೀಡದೇ, ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ ಚಿತ್ರದುರ್ಗದ ಹಿಂದೂಪರ ಕಾರ್ಯಕರ್ತರು ಡಿಜೆ ಹಾಕಿದ್ದಾರೆ ಎಂದರು. ಅಷ್ಠೆ ಅಲ್ಲದೆ ಲಕ್ಷಾಂತರ ಮಂದಿ ಭಕ್ತರು ಸೇರಿದ್ದಾರೆ, ರಾಜ್ಯದಲ್ಲೇ ನಂಬರ್ ಒನ್ ಗಣೇಶ ಉತ್ಸವ ಇದಾಗಿದ್ದು, ವಿಸರ್ಜನೆ ಮಾಡುವವರೆಗೂ ಶಾಂತಿಯಿಂದ ಇರಬೇಕು ಎಂದರು