ಚಳ್ಳಕೆರೆ:- ನಗರದಲ್ಲಿ ಶನಿವಾರ ಸಂಜೆ 5 ಗಂಟೆಗೆ ವಿಶ್ವ ಹಿಂದೂ ಪರಿಷತ್ನಿಂದ ಹಿಂದೂ ಮಹಾಗಣಪತಿ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು. ಈ ಬೃಹತ್ ಶೋಭ ಯಾತ್ರೆಗೆ ಮುಸಲ್ಮಾನ ಸಮುದಾಯದವರು ಸಾತ್ ನೀಡಿದ್ದಾರೆ, ಶೋಭ ಯಾತ್ರೆಗೆ ಬಂದ ಜನರಿಗೆ ನೀರು ಮತ್ತು ಮಜ್ಜಿಗೆ ವಿತರಿಸುವ ಮೂಲಕ ಪರಸ್ಪರ ಇಂದು ಮತ್ತು ಮುಸಲ್ಮಾನರ ಸಹೋದರತ್ವ ಬಾಂಧವ್ಯ ಬೆಸದಿದ್ದಾರೆ. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಅಧ್ಯಕ್ಷ ಅಲಿ ಮಾತನಾಡಿ, ಪ್ರತಿದಿನ ಹಿಂದೂ ಮತ್ತೆ ಮುಸ್ಲಿಮರು ಸಮಾಜದಲ್ಲಿ ಒಟ್ಟಿಗೆ ಬಾಳುತ್ತಿದ್ದೇವೆ ನಮ್ಮಲ್ಲಿ ಯಾವುದೇ ಕಲಹಗಳು ಬಾರದೇ ಇರಲಿ, ಶೋಭಾ ಯಾತ್ರೆಗೆ ಬರುವ ಜನರಿಗೆ ಬಾಯರಿಕೆ ನೀಗಿಸಲು ನೀರು ಮತ್ತು ಮಜ್ಜಿಗೆ ವಿತರಣೆ ಮಾಡುತಿದ್ದೇವೆ ಇದು ನಮಗೆ ಅತ್ಯಂತ ತೃಪ್ತಿದಾಯಕವಾಗಿದೆ ಎಂದರು.