ಕಲಬುರಗಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರ ಹಾಗೂ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.ಎಸ್‌ಐಟಿ ತನಿಖೆಯಿಂದ ಏನೂ ಸಿಕ್ಕಿಲ್ಲ, ಪಾನ ಪರಾಕ್ ಚಿಟಿ ಮಾತ್ರ ಸಿಕ್ಕಿವೆ ಎಂದು ವ್ಯಂಗ್ಯವಾಡಿದರು. ಭಾನುವಾರ11 ಗಂಟೆಗೆ ಮಾತನಾಡಿದ ಅವರು, ಹಿಂದೂ ಧರ್ಮ-ದೇವಾಲಯಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಟೀಕಿಸಿದರು. ಬಿಜೆಪಿ–ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಇದರ. ಇಬ್ಬರ ಬಳಿ ಇಬ್ಬರ ಸಿಡಿಗಳು ಇವೆ. ಆದ್ದರಿಂದ ಪರಸ್ಪರ ಟೀಕೆ ಇಲ್ಲ ಎಂದರು. ವಿಜಯೇಂದ್ರ ಹಾಗೂ ಡಿಕೆಶಿ ವಿರುದ್ಧವೂ ಕಟುವಾಗಿ ಹರಿಹಾಯ್ದ ಅವರು, ಇದು ಅಡ್ಜಸ್ಟ್ಮೆಂಟ್ ರಾಜಕಾರಣ ಎಂದು ಚಾಟಿ ಬೀಸಿದರು.