ಸೆಪ್ಟಂಬರ್ 1, ಸೋಮವಾರ ಮಧ್ಯಾಹ್ನ 1:30ಕ್ಕೆ ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಫಂಕ್ಷನ್ ಹಾಲ್‌ನಲ್ಲಿ ಪತ್ರಕರ್ತರ ದ್ವನಿ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಮಾ.ನಿ.ಪ್ರ. ಅಭಿನವ ಪ್ರಭು ಮಹಾಸ್ವಾಮಿಗಳು ಮಾತನಾಡಿ “ವಿದ್ಯಾರ್ಥಿಗಳು ಮೊಬೈಲ್‌ಗೆ ಒಲಿಯದೆ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಡಾ. ಅಂಬೇಡ್ಕರ್ ಅವರ ಶಿಕ್ಷಣ ತತ್ವ, ಸಂವಿಧಾನದ ಮಹತ್ವ ತಿಳಿದುಕೊಳ್ಳಬೇಕು” ಎಂದರು.ಮಾಧ್ಯಮ ಅಕಾಡೆಮಿ ಸದಸ್ಯ ನಿಂಗಜ್ಜ ಗಂಗಾವತಿ ಹಾಗೂ ಪ್ರಾಂಶುಪಾಲ ಡಾ. ಶ್ರೀನಿವಾಸ ರೆಡ್ಡಿ ಪತ್ರಿಕೆಯ ಮಹತ್ವವನ್ನು ಹಂಚಿಕೊಂಡರು. ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ನಿಧಿ ಮೀಸಲು ಮಾಡುವುದಾಗಿ ಭ