ಕಲಬುರಗಿ : ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಸೊನ್ನ ಬ್ಯಾರೇಜ್‌ಗೆ ನಿರಂತರವಾಗಿ ನೀರು ಬಿಡಲಾಗ್ತಿದ್ದು, ಇತ್ತ ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ 1.85 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ಶೇ ಅರ್ಧದಷ್ಟು ಮುಳುಗಡೆಯಾಗಿದೆ.. ಆಗಷ್ಟ್22 ರಂದು ಬೆಳಗ್ಗೆ 7 ಗಂಟಗೆ ಮಾಹಿತಿ ಲಭ್ಯವಾಗಿದೆ... ನದಿಯಲ್ಲಿರೋ ಶ್ರೀ ಯಲ್ಲಮ್ಮದೇವಿ ದೇವಸ್ಥಾನ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.. ಅತ್ತ ದೇವಸ್ಥಾನ ಸಹ ಶೇ ಅರ್ಧದಷ್ಟು ಮುಳುಗಡೆಯಾಗಿದ್ದು, ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ..