ಕಾಲೇಜುಗೆ ಹೋಗಲಿಕೆ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದೆ ಇಂದು ಶನಿವಾರ 12 ಗಂಟೆಗೆ ಎಬಿವಿಪಿ ವಿದ್ಯಾರ್ಥಿಗಳು ಸರ್ಕಾದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಅಧಿಕಾರಿಗಳು ಸ್ಥಳಕ್ಕೆ ಬರುವರೆಗೆ ನಾವು ಹೋಗಲ್ಲ ಎಂದು ಪಟ್ಟು ಹಿಡಿದಿದ್ದು ಬೆಳಗಾವಿ ನಗರಕ್ಕೆ ಹಳ್ಳಿಗಳಿಂದ ಆಗಮಿಸುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸುಮಾರು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದು ಪ್ರತಿ ದಿನ 10 ಗಂಟೆಗೆ ಶಾಲಾ ಕಾಲೇಜು ಆರಂಭ ಆದ್ರೆ ಬೆಳಗ್ಗೆ 7 ಗಂಟೆಗೆ ಮನೆ ಬಿಡಬೇಕು. ಕೇವಲ ಐದಾರು ಕಿಮಿ ಪ್ರಯಾಣಿಸಲು ಮೂರು ಗಂಟೆ ಬೇಕಾಗುತ್ತೆ.ಇದಕ್ಕೆ ಮುಖ್ಯ ಕಾರಣ ಸಾರಿಗೆ ಇಲಾಖೆಯ ಬೇಜವಾಬ್ದಾರಿ ಎಂದರು ಸರಿಯಾದ ಸಮಯಕ್ಕೆ ಬಸ್ಸುಗಳು ಎಂದೂ ಕಾರ್ಯಾಚರಣೆ ನಡೆಸಿಲ್ಲಾ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.