ಭಾರತ್ ಬೆಂಜ್ ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಗುಡ್ಸ್ ವಾಹನದ ನಡುವೆ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ನಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಪುಲಗಾನಹಳ್ಳಿ ಬಳಿ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದ 45 ವರ್ಷ ವಯಸ್ಸಿನ ಜಗದೀಶ್ ಎಂಬಾತ ಸಾವನ್ನಪ್ಪಿರುವ ದುರ್ದೈವಿ. ಗೌರಿಬಿದನೂರು ತಾಲ್ಲೂಕಿನ ತರಿದಾಳು ಗ್ರಾಮದ ಮೃತ ಜಗದೀಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಹೂವನ್ನು ಮಾರ್ಕೆಟ್ ಹಾಕಿ ಮನೆ ಬರುವಾಗ ಘಟನೆ ನಡೆದಿದೆ. ಮೃತ ಜಗದೀಶ್ ನನ್ನು ನಗರದ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು,ಸ್ಥಳಕ್ಕೆ ಮಂಚೆನಹಳ್ಳಿ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.