ನಗರದ ಖಾಸಗಿ ಆಸ್ಪತ್ರೆ ಹೊರಭಾಗದಲ್ಲಿ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದ ದೇವರಾಜ ಪುಟ್ಟನಗೌಡ ಕರನಗೌಡ್ರ (26) ಮೃತ ವ್ಯಕ್ತಿಯಾಗಿದ್ದಾರೆ. ಈತ ಕಳೆದ ಹಲವು ದಿನಗಳಿಂದ ಸುಸ್ತಾಗಿ ಬೀಳುತ್ತಿದ್ದ. ಅಲ್ಲದೆ ಉಸಿರಾಟದ ತೊಂದರೆ ಎಂದು ಆಸ್ಪತ್ರೆಗೆ ತೋರಿಸಿಕೊಂಡು ವಾಪಸ್ ಆಗುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.