ಚನ್ನರಾಯಪಟ್ಟಣ :ಹಾಲಿಗೆ ನೀರು ಮಿಶ್ರಣವಾಗಿದೆ ಎಂಬ ಕಾರಣ ನೀಡಿ ಕಳೆದ 12 ದಿನಗಳಿಂದ ಡೈರಿಗೆ ಹಾಲು ಹಾಕಿಸಿಕೊಳ್ಳದೆ ರೈತರನ್ನು ವಾಪಸ್ ಕಳುಹಿಸುತ್ತಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಗೆಜ್ಜೆಗಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತರು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ ಆದರೆ ಕಳೆದ 12 ದಿನಗಳಿಂದ ರೈತರು ತಂದ ಹಾಲನ್ನು ಡೈರಿಗೆ ಹಾಕಿಸಿಕೊಳ್ಳದೆ ವಾಪಸ್ ಕಳುಹಿಸುತ್ತಿದ್ದಾರೆ. ಇದರಿಂದ ರೈತರು ನಿತ್ಯವೂ ನಷ್ಟ ಅನುಭವಿಸುವಂತಾಗಿದೆ, ಹಾಲಿಗೆ ನೀರು ಮಿಶ್ರಣವಾಗಿದೆ ಎಂಬ ಕುಂಟು ನೆಪ ಹೇಳಿಕೊಂಡು ರೈತರ ಹಾಲನ್ನು ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.